MA Media News - Coastal karnataka's leading epaper

ಹೆಬ್ರಿ ಜೇಸಿಐ : ರಾಮನವಮಿ ಆಚರಣೆ,ಭಜನಾ ಸಂಕೀರ್ತನೆ 


ಭಜನೆ ಇದ್ದಲ್ಲಿ ವಿಭಜನೆ ಇಲ್ಲ- ರಾಧಾಕೃಷ್ಣ ಕ್ರಮಧಾರಿ 


ಹೆಬ್ರಿ,: ದೇವರನ್ನು ಒಲಿಸಿಕೊಳ್ಳುವ ಸುಲಭ ಮಾರ್ಗ ಎಂದರೆ ಅದು ಭಜನೆ. ಪ್ರತಿಯೊಬ್ಬರ ಮನೆಯಲ್ಲಿ ಕೂಡ ನಿರಂತರವಾಗಿ ದಿನಕ್ಕೆ ಒಂದು ಗಂಟೆಯಾದರೂ ಭಜನೆ ಮಾಡುವುದರ ಮೂಲಕ ನಮ್ಮ ಸಂಸ್ಕೃತಿ ಸಂಸ್ಕಾರವನ್ನು ಉಳಿಸಿ ಒಗ್ಗೂಡಲು ಸಾಧ್ಯ.  ಭಜನೆ ಇದ್ದಲ್ಲಿ ವಿಭಜನೆ ಇಲ್ಲ ಇಂದು ಜೆಸಿಐ ಪೂರ್ವ ಅಧ್ಯಕ್ಷ ರಾಧಾಕೃಷ್ಣ ಕ್ರಮಧಾರಿ ಹೇಳಿದರು.  

ಅವರು ಎ.17ರಂದು ಹೆಬ್ರಿ ಜೆಸಿಐ ನೇತೃತ್ವದಲ್ಲಿ ಚಾಣಕ್ಯ ಎಜುಕೇಶನ್  ಕಲ್ಚರ್ ಅಕಾಡೆಮಿ  ಹೆಬ್ರಿ ಇವರ ಸಹಯೋಗದಲ್ಲಿ  ಶಿವಪುರ ಮಾಕ್ಕಿ ಮಠದಲ್ಲಿ ರಾಮನವಮಿ ಅಂಗವಾಗಿ ದಿನವಿಡಿ ನಡೆದ ರಾಮನಾಮ ಸಂಕೀರ್ತನೆ ಮತ್ತು ಕುಣಿತ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

 ಸಮಾರಂಭದ ಅಧ್ಯಕ್ಷತೆಯನ್ನು ಹೆಬ್ರಿಜಿಸಿ ಅಧ್ಯಕ್ಷ ರಕ್ಷಿತಾಪಿ ಭಟ್ ವಹಿಸಿದ್ದರು. ಮಾರ್ಮಕ್ಕಿ  ಮಠದ ಮುಖ್ಯಸ್ಥರಾದ ರಾಮಕೃಷ್ಣ ಭಟ್, ಪುಟ್ಟಣ್ಣ ಭಟ್,  ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲೆ ವೀಣಾ ಯು.ಶೆಟ್ಟಿ, ಜೆಸಿಐ ಪೂರ್ವ ಅಧ್ಯಕ್ಷರಾದ  ಸೋನಿ ಪಿ. ಶೆಟ್ಟಿ ವೀಣಾ ಆರ್. ಭಟ್,  ಪ್ರಜ್ಞಾ ಮುದ್ರಾಡಿ, ಉದಯಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

 ಬಳಿಕ ಚಿತ್ರ ಕಲಾವಿದ ನಿತೀಶ್ ಥರ್ಮಾಕೋಲ್ ಮೂಲಕ ಕಲಾಕೃತಿ ರಚನೆ ಪ್ರಜ್ಞಾ ಮುದ್ರಾಡಿಯವರಿಂದ ಮಾಡಲು ನೇಯುವ ಕಾರ್ಯಗಾರ ಹಾಗೂ ರಕ್ಷಿತಾಪಿ ಭಟ್ಟವರಿಂದ ರಂಗೋಲಿ ಹಾಕುವ ಬಗ್ಗೆ ತರಬೇತಿ ನಡೆಯಿತು. ಜೆಸಿಐನ ದಾನ ಕಾರ್ಯಕ್ರಮದ ಅಂಗವಾಗಿ ಅನ್ನದಾನ ನಡೆಯಿತು.

 ಪ್ಲೇಟ್ ಕ್ಲೀನ್ ಚಾಲೆಂಜ್ ಕಾರ್ಯಕ್ರಮದ ಅಂಗವಾಗಿ 

 ಬಡಿಸಿದ ಅನ್ನ ಆಹಾರವನ್ನು ಹಾಳು ಮಾಡದೆ ಜಾಗೃತಿ ಮೂಡಿಸಲಾಯಿತು 




ವಾಸ್ತವ ಸತ್ಯ -ವ್ಯಕ್ತಿ, ವಿಷಯ,ನಿರೀಕ್ಷೆ



 ವ್ಯಕ್ತಿ, ವಿಷಯ,ನಿರೀಕ್ಷೆ:ಆವ ವ್ಯಕ್ತಿಯೊಳಿರಲಿ ಅದಾವ ವಿಷಯೊದೊಳಿರಲಿ ,ನಿರತ ಒಳಿತಲ್ಲ ಅತಿಯಾದ ನಿರೀಕ್ಷೆ: ಜೀವನದ ಪ್ರತಿಕ್ಷಣವೂ ಬಹುಬಗೆಯ ಪರೀಕ್ಷೆ,ನಾನು ನನ್ನದು ಎಂಬ ಅಹಮಿಕೆಯು ನಮ್ಮೊಳಿರೆ,ಕಾಲ ಕಾಲಕೆ ಅರಿತು ದೇವ ನೀಡುವ ಶಿಕ್ಷೆ:ಜೀವನದ ಕಕ್ಷೆಯೊಳು ಬಂದು ಪೋಗುವರಿಹರು,ಬಲುತರದ ಪಾಠವನು ಕಲಿಸುವವರಿಹರು:ಪಠ್ಯ ಪಾಠವು ಬೇಕು ನೈತಿಕತೆ ಬಿಟ್ಟಲ್ಲ,ಭೌತಿಕತೆ ನೈತಿಕತೆ ಬಿಟ್ಟ ಶಿಕ್ಷಣ ಸಲ್ಲ:ಸ್ವಾಭಿಮಾನದೊಳಿಹರ ಬದುಕ ಬಿಡುವವರಿಲ್ಲ,ಸ್ವಾಭಿಮಾನವ ಮರೆತ ಬದುಕು ಬದುಕಲ್ಲ:ಸಕಲರನು ಗ್ರಹಿಸುತಿಹ ಹರಿಯೆಲ್ಲ ಬಲ್ಲ,ಕೃಷ್ಣಾರ್ಪಣಮಸ್ತು:

✍️ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ,,

ಹೆಬ್ರಿ ಜೇಸಿಐ ನೇತ್ರತ್ವದಲ್ಲಿ ಬೇಸಿಗೆ ರಜಾ ಶಿಬಿರಕ್ಕೆ ಚಾಲನೆ 


ಶಿಬಿರಗಳಿಂದ ಮಕ್ಕಳ ವ್ಯಕ್ತಿತ್ವ ವಿಕಸನ -ಸೀತಾನದಿ ವಿಠಲ್ ಶೆಟ್ಟಿ 


ಹೆಬ್ರಿ : ರಜಾ ಸಮಯವನ್ನು ವ್ಯರ್ಥ ಕಾಲಹರಣ ಮಾಡುವ ಬದಲು ಇಂತಹ ಶಿಬಿರಗಳಲ್ಲಿ ಪಾಲ್ಗೊಂಡಾಗ ಮಕ್ಕಳ ವ್ಯಕ್ತಿತ್ವ ವಿಕಸನವಾಗಲು ಸಾಧ್ಯವಾಗುತ್ತದೆ ಎಂದು ಸೀತಾ ನದಿ ಸೌಖ್ಯ ಯೋಗ ಟ್ರಸ್ಟ್ ನ ಅಧ್ಯಕ್ಷ ಸೀತಾ ನದಿ ವಿಠಲಶೆಟ್ಟಿ ಹೇಳಿದರು. 

ಅವರು ಎ.16ರಂದು ಹೆಬ್ರಿ ಜೆಸಿಐ ನೇತೃತ್ವದಲ್ಲಿ ಚಾಣಕ್ಯ ಎಜುಕೇಶನ್  ಕಲ್ಚರ್ ಅಕಾಡೆಮಿ  ಹೆಬ್ರಿ ಇವರ ಸಹಯೋಗದೊಂದಿಗೆ ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನಲ್ಲಿ ನಡೆದ  ಬೇಸಗೆ ರಜಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.


 ಬಳಿಕ ಯೋಗದ ಬಗ್ಗೆ  ಪ್ರಾತ್ಯಕ್ಷಿತೆಯೊಂದಿಗೆ ಮಾಹಿತಿ ನೀಡಿ ಯೋಗ ಪ್ರತಿಯೊಬ್ಬರ ಬದುಕಿನ ಅವಿಭಾಜ್ಯ ಅಂಗ ನಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಲು ಯೋಗ ಸಹಕಾರಿ ಎಂದರು. 

 ಸಮಾರಂಭದ ಅಧ್ಯಕ್ಷತೆಯನ್ನು ಹೆಬ್ರಿಜಿಸಿ ಅಧ್ಯಕ್ಷ ರಕ್ಷಿತಾ ಪಿ ಭಟ್ ವಹಿಸಿದ್ದರು. ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲೆ ವೀಣಾ ಯು.ಶೆಟ್ಟಿ, ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಪ್ರಮುಖ ಸುದ್ದಿಗಳು

[ಪ್ರಮುಖ ಸುದ್ದಿಗಳು][slider2 autoplay]

ಸ್ಥಳೀಯ ಸುದ್ದಿಗಳು

[ಸ್ಥಳೀಯ ಸುದ್ದಿಗಳು][fbig1 animated]

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget