ಹೆಬ್ರಿ ಟ್ರೀ ಪಾರ್ಕ್ :ಚಾಣಕ್ಯ ನಲಿಕಲಿ ಶಿಬಿರಲ್ಲಿ ಅಗ್ನಿ ಪ್ರತ್ಯಕ್ಸಿತೆ

ಹೆಬ್ರಿ  :ಚಾಣಕ್ಯ ನಲಿಕಲಿ ಶಿಬಿರಲ್ಲಿ ಅಗ್ನಿ ಪ್ರತ್ಯಕ್ಸಿತೆ 


ಹೆಬ್ರಿ,: ಹೆಬ್ರಿಯ ಅರಣ್ಯ ಇಲಾಖೆ ಹಾಗೂ ಅಗ್ನಿ ಶಾಮಕ ಠಾಣೆ ಕಾರ್ಕಳ  ಇವರ ಸಹಯೋಗದಲ್ಲಿ ಚಾಣಕ್ಯ ಏಜ್ಯಕೇ ಶನ್ ಮತ್ತು ಕಲ್ಚರಲ್ ಆಕಾಡೆಮಿ ಹೆಬ್ರಿ ನೇತೃತ್ವದಲ್ಲಿ ಚಾಣಕ್ಯ ನಲಿಕಲಿ ವೈವಿಧ್ಯಮಯ ಬೇಸಿಗೆ ರಜಾ ಶಿಬಿರದ ವಿದ್ಯಾರ್ಥಿಗಳಲ್ಲಿ ಜಾಗ್ರತಿ ಮೂಡಿಸುವ ಉದ್ದೇಶದಿಂದ ಎ.15 ರಂದು ಬೆಳಿಗ್ಗೆ ಹೆಬ್ರಿ ಸಾಲು ಮರದ ತಿಮ್ಮಕ್ಕ ಟ್ರೀ ಪಾರ್ಕ್ ನಲ್ಲಿ ಅಗ್ನಿ ಪ್ರತ್ಯಕ್ಸಿತೆ ನಡೆಯಿತು . 

ಹೆಬ್ರಿ ವಲಯ ಅರಣ್ಯಧಿಕಾರಿ ಅನಿಲ್ ಕುಮಾರ್ ಚಾಲನೆ ನೀಡಿ ಮಾತನಾಡಿ ಬೇಸಿಲ ಬೇಗೆ ಹೆಚ್ಚಾಗಿದೆ. ಅಲಲ್ಲಿ ಅಗ್ನಿ ಅವಗಡ ನಡೆಯುತ್ತಿದೆ. ಈ ಬಗ್ಗೆ ಜಾಗ್ರತೆ ಮೂಡಿಸುವ ಚಾಣಕ್ಯ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು. ಕಾರ್ಕಳ ಅಗ್ನಿ ಶಾಮಕ ಠಾಣೆಯ ಠಾಣಾ ಧಿಕಾರಿ ಆಲ್ಬರ್ಟ್ ಮೋನಿಶ್ ಅವರು ಅಗ್ನಿ ದುರಂತ ಮತ್ತು ಅದನ್ನು ತಡೆಯುವ ಮುಂಜಾಗ್ರತೆ ವಹಿಸುವ ಬಗ್ಗೆ ಮಾಹಿತಿ ನೀಡಿದರು.

 ಈ ಸಂದರ್ಭದಲ್ಲಿ ಹೆಬ್ರಿ ಅರಣ್ಯ ಇಲಾಖೆಯ ಅರಣ್ಯಧಿಕಾರಿ ಪ್ರಮೋದ್, ಯಜುರ್ವಿ, ಆರೋಹಿ,ಚಾಣಕ್ಯ ಸಂಸ್ಥೆಯ ಅಧ್ಯಕ್ಷ ಉದಯಕುಮಾರ್,  ಪ್ರಾಂಶುಪಾಲೆ ವೀಣಾ ಯು.ಶೆಟ್ಟಿ, ಸೋನಿ ಪಿ. ಶೆಟ್ಟಿ,ಸ್ವಾತಿ ಶೆಟ್ಟಿ,ರೀನಾ, ಮೊದಲಾದವರು ಉಪಸ್ಥಿತರಿದ್ದರು.

Labels:ಪ್ರಮುಖ ಸುದ್ದಿಗಳು

Post a Comment

ಪ್ರಮುಖ ಸುದ್ದಿಗಳು

[ಪ್ರಮುಖ ಸುದ್ದಿಗಳು][slider2 autoplay]

ಸ್ಥಳೀಯ ಸುದ್ದಿಗಳು

[ಸ್ಥಳೀಯ ಸುದ್ದಿಗಳು][fbig1 animated]
[blogger]

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget